Please enable javascript.Ramesh Valiyasala Death,ಕೇರಳದ ಜನಪ್ರಿಯ ಕಿರುತೆರೆ ನಟ ರಮೇಶ್ ವಾಲಿಯಸಾಲ ನಿಗೂಢ ಸಾವು - popular-malayalam-tv-actor-ramesh-valiyasala-found-dead-under-mysterious-circumstances - Vijay Karnataka

ಕೇರಳದ ಜನಪ್ರಿಯ ಕಿರುತೆರೆ ನಟ ರಮೇಶ್ ವಾಲಿಯಸಾಲ ನಿಗೂಢ ಸಾವು

Vijaya Karnataka Web | 11 Sep 2021, 2:56 pm
Subscribe

ಮಲಯಾಳಂನ ಜನಪ್ರಿಯ ಕಿರುತೆರೆ ನಟ ರಮೇಶ್ ವಾಲಿಯಸಾಲ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಇಂದು ಬೆಳಗ್ಗೆ ತಮ್ಮ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ನಟ ರಮೇಶ್ ವಾಲಿಯಸಾಲ ಅವರ ಮೃತದೇಹ ಪತ್ತೆಯಾಗಿದೆ ಎಂದು ವರದಿಯಾಗಿದೆ.

ಹೈಲೈಟ್ಸ್‌:

  • ಜನಪ್ರಿಯ ನಟ ರಮೇಶ್ ವಾಲಿಯಸಾಲ ಇನ್ನಿಲ್ಲ
  • ನೇಣು ಬಿಗಿದ ಸ್ಥಿತಿಯಲ್ಲಿ ನಟ ರಮೇಶ್ ವಾಲಿಯಸಾಲ ಶವ ಪತ್ತೆ
  • ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ರಾ ನಟ ರಮೇಶ್ ವಾಲಿಯಸಾಲ?

popular malayalam tv actor ramesh valiyasala found dead under mysterious circumstances
ಕೇರಳದ ಜನಪ್ರಿಯ ಕಿರುತೆರೆ ನಟ ರಮೇಶ್ ವಾಲಿಯಸಾಲ ನಿಗೂಢ ಸಾವು
ಮಲಯಾಳಂನ ಜನಪ್ರಿಯ ಕಿರುತೆರೆ ನಟ ರಮೇಶ್ ವಾಲಿಯಸಾಲ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಇಂದು (ಶನಿವಾರ, ಆಗಸ್ಟ್ 11) ಬೆಳಗ್ಗೆ ತಮ್ಮ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ನಟ ರಮೇಶ್ ವಾಲಿಯಸಾಲ ಅವರ ಮೃತದೇಹ ಪತ್ತೆಯಾಗಿದೆ ಎಂದು ವರದಿಯಾಗಿದೆ. ಕೇರಳದ ಪೊಲೀಸರು ರಮೇಶ್ ವಾಲಿಯಸಾಲ ಅವರ ಅಸಹಜ ಸಾವಿನ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ.
ಎರಡು ದಿನಗಳ ಹಿಂದೆಯಷ್ಟೇ ಮಲಯಾಳಂನ ಸಿನಿಮಾವೊಂದರ ಶೂಟಿಂಗ್‌ ಮುಗಿಸಿ ರಮೇಶ್ ವಾಲಿಯಸಾಲ ವಾಪಸ್ ಮನೆಗೆ ಬಂದಿದ್ದರು. ಇದೀಗ ಅವರು ನಿಗೂಢವಾಗಿ ಮೃತಪಟ್ಟಿದ್ದಾರೆ. ರಮೇಶ್ ವಾಲಿಯಸಾಲ ಅವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ, ಅವರ ಸ್ನೇಹಿತರು, ಚಲನಚಿತ್ರ ಮತ್ತು ಕಿರುತೆರೆ ಸಹೋದ್ಯೋಗಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಕುಟುಂಬಕ್ಕೆ ಸಾಂತ್ವನ ತಿಳಿಸಿದ್ದಾರೆ.

C Jayaram: 'ಮಿಲನ' ಪ್ರಕಾಶ್ ತಂದೆ, ಹಿರಿಯ ನಿರ್ಮಾಪಕ ಸಿ. ಜಯರಾಮ್ ಇನ್ನಿಲ್ಲ!
ರಮೇಶ್ ವಾಲಿಯಸಾಲ ಅವರಿಗೆ ಕಾಡುತ್ತಿತ್ತಾ ಆರ್ಥಿಕ ಮುಗ್ಗಟ್ಟು?
54 ವರ್ಷ ವಯಸ್ಸಿನ ರಮೇಶ್ ವಾಲಿಯಸಾಲ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದರು ಎಂದು ವರದಿಯಾಗಿದೆ. ಕೋವಿಡ್ ಲಾಕ್‌ಡೌನ್ ಬಳಿಕ ರಮೇಶ್ ವಾಲಿಯಸಾಲ ಅವರಿಗೆ ತೀವ್ರ ಹಣಕಾಸಿನ ಮುಗ್ಗಟ್ಟು ಎದುರಾಗಿತ್ತು ಎಂದು ಮೂಲಗಳು ತಿಳಿಸಿವೆ.

‘’ಜೀವನದಲ್ಲಿ ಬಹಳಷ್ಟು ಸಮಸ್ಯೆಗಳಿರುತ್ತವೆ. ಆದರೆ ಅದರಿಂದ ತಪ್ಪಿಸಿಕೊಂಡು ಓಡಿಹೋಗುವುದರಲ್ಲಿ ಅರ್ಥವಿಲ್ಲ. ನನ್ನ ಆತ್ಮೀಯ ಗೆಳೆಯ ರಮೇಶನಿಗೆ ಶ್ರದ್ಧಾಂಜಲಿಗಳು’’ ಎಂದು ನಿರ್ಮಾಪಕ ಎನ್‌.ಎಂ.ಬಾದುಷಾ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

'ಕಾಂಚನಾ 3' ಸಿನಿಮಾದಲ್ಲಿ ನಟಿಸಿದ್ದ ರಷ್ಯಾ ಮೂಲದ ನಟಿ ಗೋವಾದಲ್ಲಿ ಶವವಾಗಿ ಪತ್ತೆ!
ಅಂದ್ಹಾಗೆ, ರಮೇಶ್ ವಾಲಿಯಸಾಲ ಜನಪ್ರಿಯ ಮತ್ತು ಬಿಡುವಿಲ್ಲದ ಟಿವಿ ಸೀರಿಯಲ್ ನಟರ ಪೈಕಿ ಒಬ್ಬರಾಗಿದ್ದರು. ಸೀರಿಯಲ್‌ಗಳಲ್ಲಿ ಮಾತ್ರವಲ್ಲ ಅನೇಕ ಸಿನಿಮಾಗಳಲ್ಲೂ ರಮೇಶ್ ವಾಲಿಯಸಾಲ ಅಭಿನಯಿಸಿದ್ದರು. ಚಿಕ್ಕವಯಸ್ಸಿಂದಲೂ ನಟನೆ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದ ರಮೇಶ್ ವಾಲಿಯಸಾಲ ಕಾಲೇಜು ದಿನಗಳಲ್ಲಿ ರಂಗಭೂಮಿ ಪ್ರವೇಶ ಮಾಡಿದ್ದರು. ಬಳಿಕ ಕಿರುತೆರೆ ಹಾಗೂ ಸಿನಿ ಲೋಕಕ್ಕೆ ಕಾಲಿಟ್ಟರು. ಕಳೆದ 22 ವರ್ಷಗಳಿಂದ ರಮೇಶ್ ವಾಲಿಯಸಾಲ ಬಣ್ಣದ ಬದುಕಿನಲ್ಲಿ ಸಕ್ರಿಯರಾಗಿದ್ದರು.

ನಟ ರಮೇಶ್ ವಾಲಿಯಸಾಲ ನಿಧನಕ್ಕೆ ನಟಿ ಅಶ್ವತ್ಥಿ, ರಾಜೇಶ್ ಹೆಬ್ಬಾರ್, ಕಿಶೋರ್ ಸತ್ಯ ಸೇರಿದಂತೆ ಕಿರುತೆರೆ ಲೋಕ ಹಾಗೂ ಮಾಲಿವುಡ್‌ನ ಅನೇಕ ತಾರೆಯರು ಕಂಬನಿ ಮಿಡಿದಿದ್ದಾರೆ.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ