Please enable javascript.Kannada Actor Sathyajith,ಕನ್ನಡ ನಟ ಸತ್ಯಜಿತ್ ನಿಧನಕ್ಕೆ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಸಂತಾಪ - kannada actor sathyajith passes away dr cn ashwath narayan pays tribute to the actor - Vijay Karnataka

ಕನ್ನಡ ನಟ ಸತ್ಯಜಿತ್ ನಿಧನಕ್ಕೆ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಸಂತಾಪ

Vijaya Karnataka Web | 10 Oct 2021, 1:26 pm
Subscribe

ಕನ್ಮಡ ಚಿತ್ರರಂಗದ ಹಿರಿಯ ನಟ ಸತ್ಯಜಿತ್‌ ಅವರ ನಿಧನಕ್ಕೆ ಸಚಿವ‌ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಅವರು‌ ಸಂತಾಪ‌ ವ್ಯಕ್ತಪಡಿಸಿದ್ದಾರೆ.

ಹೈಲೈಟ್ಸ್‌:

  • ಕನ್ನಡ ನಟ ಸತ್ಯಜಿತ್ ನಿಧನ
  • ಅನಾರೋಗ್ಯದಿಂದ ಬಳಲುತ್ತಿದ್ದ ನಟ ಸತ್ಯಜಿತ್
  • ನಟ ಸತ್ಯಜಿತ್ ನಿಧನಕ್ಕೆ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಸಂತಾಪ

kannada actor sathyajith passes away dr cn ashwath narayan pays tribute to the actor
ಕನ್ನಡ ನಟ ಸತ್ಯಜಿತ್ ನಿಧನಕ್ಕೆ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಸಂತಾಪ
ಕನ್ನಡ ಚಿತ್ರರಂಗದ ಹಿರಿಯ ನಟ ಸತ್ಯಜಿತ್ ವಿಧಿವಶರಾಗಿದ್ದಾರೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ನಟ ಸತ್ಯಜಿತ್ ಅವರನ್ನ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಕಳೆದ ಕೆಲ ದಿನಗಳಿಂದ ಆಸ್ಪತ್ರೆಯ ಐಸಿಯುನಲ್ಲಿ ನಟ ಸತ್ಯಜಿತ್ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ನಟ ಸತ್ಯಜಿತ್ (72) ಕೊನೆಯುಸಿರೆಳೆದಿದ್ದಾರೆ.
ಡಾ.ಸಿ.ಎನ್.ಅಶ್ವತ್ಥ ನಾರಾಯಣ ಸಂತಾಪ
ಕನ್ಮಡ ಚಿತ್ರರಂಗದ ಹಿರಿಯ ನಟ ಸತ್ಯಜಿತ್‌ ಅವರ ನಿಧನಕ್ಕೆ ಸಚಿವ‌ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಅವರು‌ ಸಂತಾಪ‌ ವ್ಯಕ್ತಪಡಿಸಿದ್ದಾರೆ. ‘’ಖಳನಾಯಕ, ಪೋಷಕ ನಟ ಸೇರಿದಂತೆ ವೈವಿಧ್ಯಮಯ ಪಾತ್ರಗಳಲ್ಲಿ‌ 600ಕ್ಕೂ ಹೆಚ್ಷು‌ ಸಿನಿಮಾಗಳಲ್ಲಿ‌ ನಟ ಸತ್ಯಜಿತ್ ಅವರು ಅಭಿನಯಿಸಿದ್ದ‌ರು. ತಮ್ಮ ಪ್ರೌಢ ನಟನೆಯ ಮೂಲಕ ಜನರ‌ ಹೃದಯವನ್ನು ಗೆದ್ದಿದ್ದರು. ತಮ್ಮ ಕಲಾಸೇವೆಯಿಂದಾಗಿ ಅವರ ಹೆಸರು ಕನ್ನಡ ಸಾಂಸ್ಕೃತಿಕ ಕ್ಷೇತ್ರದಲ್ಲಿ‌ ಚಿರಸ್ಥಾಯಿಯಾಗಿರುತ್ತದೆ’’ ಎಂದಿದ್ದಾರೆ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ.

Sathyajith Passes Away: ಕನ್ನಡ ಚಿತ್ರರಂಗದ ನಟ ಸತ್ಯಜಿತ್ ಇನ್ನಿಲ್ಲ
ಬಹುಬೇಡಿಕೆಯ ಪೋಷಕ ನಟರಾಗಿದ್ದ ಸತ್ಯಜಿತ್
ಕನ್ನಡ ಚಿತ್ರರಂಗದಲ್ಲಿ ಸತ್ಯಜಿತ್ ಅಂತಲೇ ಖ್ಯಾತಿ ಪಡೆದಿರುವ ಇವರ ನಿಜನಾಮ ಸಯ್ಯದ್ ನಿಜಾಮುದ್ದೀನ್. ಬಣ್ಣದ ಬದುಕಿಗೆ ಕಾಲಿಡುವ ಮುನ್ನ ಸಯ್ಯದ್ ನಿಜಾಮುದ್ದೀನ್ ಬಸ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದರು. ನಟನೆಯಲ್ಲಿ ಆಸಕ್ತಿ ಹೊಂದಿದ್ದ ಅವರು ಹಲವು ನಾಟಕಗಳಲ್ಲಿ ಅಭಿನಯಿಸಿದ್ದರು. ಬಣ್ಣದ ಚಿತ್ರರಂಗಕ್ಕೆ ಸತ್ಯಜಿತ್ ಪಾದಾರ್ಪಣೆ ಮಾಡಿದರು.

Kannada Actor Sathyajith: ಕನ್ನಡ ನಟ ಸತ್ಯಜಿತ್ ಬಗ್ಗೆ ಹಲವರಿಗೆ ಗೊತ್ತಿಲ್ಲದ ಸತ್ಯ ಸಂಗತಿಗಳು
ನಟ ಸತ್ಯಜಿತ್ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟಿದ್ದು ಬಾಲಿವುಡ್‌ನಿಂದ. 1986ರಲ್ಲಿ ತೆರೆಗೆ ಬಂದ ನಾನಾ ಪಾಟೇಕರ್ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದ ಹಿಂದಿ ಸಿನಿಮಾ ‘ಅಂಕುಶ್’ ಚಿತ್ರದಲ್ಲಿ ಸತ್ಯಜಿತ್ ಅಭಿನಯಿಸಿದ್ದರು. ಬಳಿಕ ಕನ್ನಡದ ‘ಅರುಣ ರಾಗ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ನಟ ಸತ್ಯಜಿತ್ ಕಾಲಿಟ್ಟರು. ನಂತರ ‘ನ್ಯಾಯಕ್ಕೆ ಶಿಕ್ಷೆ’, ‘ಅಂತಿಮ ತೀರ್ಪು’, ‘ಶಿವ ಮೆಚ್ಚಿದ ಕಣ್ಣಪ್ಪ’, ‘ರಣರಂಗ’, ‘ನ್ಯಾಯಕ್ಕಾಗಿ ನಾನು’, ‘ಯುದ್ಧಕಾಂಡ’, ‘ಇಂದ್ರಜಿತ್’, ‘ನಮ್ಮೂರ ಹಮ್ಮೀರ’, ‘ಪೊಲೀಸ್ ಲಾಕಪ್’, ‘ಮನೆದೇವ್ರು’, ‘ಮಂಡ್ಯದ ಗಂಡು’, ‘ಪೊಲೀಸ್ ಸ್ಟೋರಿ’, ‘ಸರ್ಕಲ್ ಇನ್ಸ್‌ಪೆಕ್ಟರ್’, ‘ಪಟೇಲ’, ‘ದುರ್ಗದ ಹುಲಿ’, ‘ಅಪ್ಪು’, ‘ಧಮ್’, ‘ಅಭಿ’, ‘ಆಪ್ತಮಿತ್ರ’, ‘ಅರಸು’, ‘ಇಂದ್ರ’, ‘ಭಾಗ್ಯದ ಬಳೆಗಾರ’, ‘ಕಲ್ಪನಾ’, ‘ಗಾಡ್ ಫಾದರ್’, ‘ಲಕ್ಕಿ’, ‘ಉಪ್ಪಿ 2’, ‘ಮಾಣಿಕ್ಯ’, ‘ರನ್ನ’, ‘ರಣವಿಕ್ರಮ’, ‘ಮೈತ್ರಿ’ ಮುಂತಾದ ಹಲವು ಚಿತ್ರಗಳಲ್ಲಿ ಸತ್ಯಜಿತ್ ನಟಿಸಿದರು. ಮೂರುವರೆ ದಶಕಗಳ ಸಿನಿ ಜರ್ನಿಯಲ್ಲಿ ನಟ ಸತ್ಯಜಿತ್ 650ಕ್ಕೂ ಅಧಿಕ ಸಿನಿಮಾಗಳಲ್ಲಿ ಮಿಂಚಿದ್ದಾರೆ. ಪೋಷಕ ಪಾತ್ರ ಹಾಗೂ ನೆಗೆಟಿವ್ ಪಾತ್ರಗಳಲ್ಲೇ ನಟ ಸತ್ಯಜಿತ್ ಹೆಚ್ಚು ಗುರುತಿಸಿಕೊಂಡಿದ್ದರು.

​ಕಾಲು ಕಳೆದುಕೊಂಡಿದ್ದರೂ ಕಲಾವಿದರ ಸಂಘ ನೆರವಿಗೆ ಬರಲಿಲ್ಲ: ಖಳ ನಟ ಸತ್ಯಜಿತ್‌
35 ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಸತ್ಯಜಿತ್‌ಗೆ ಅನಾರೋಗ್ಯ ಬಾಧಿಸುತ್ತಿತ್ತು. ಗ್ಯಾಂಗ್ರಿನ್‌ನಿಂದಾಗಿ ಅವರ ಒಂದು ಕಾಲನ್ನ ಕತ್ತರಿಸಲಾಗಿತ್ತು. ಒಂದು ಕಾಲನ್ನ ಕಳೆದುಕೊಂಡಿದ್ದ ನಟ ಸತ್ಯಜಿತ್ ವೀಲ್ ಚೇರ್‌ನಲ್ಲಿ ಕುಳಿತುಕೊಂಡೇ ‘ಸೆಕೆಂಡ್ ಹಾಫ್’ ಸಿನಿಮಾದಲ್ಲಿ ಅಭಿನಯಿಸಿದ್ದರು. ಪ್ರಿಯಾಂಕಾ ಉಪೇಂದ್ರ ನಟನೆಯ ‘ಸೆಕೆಂಡ್ ಹಾಫ್’ ಚಿತ್ರವೇ ನಟ ಸತ್ಯಜಿತ್ ಅಭಿನಯದ ಕಡೆಯ ಚಿತ್ರವಾಗಿತ್ತು.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ