Please enable javascript.Umesh Hegde Death,ಕನ್ನಡ ಧಾರಾವಾಹಿ, ಸಿನಿಮಾ ನಟ ಉಮೇಶ್ ಹೆಗಡೆ ವಿಧಿವಶ; ಸಂತಾಪ ಸೂಚಿಸಿದ ಚಿತ್ರರಂಗ - kannada serial movie actor umesh hegde passed away - Vijay Karnataka

ಕನ್ನಡ ಧಾರಾವಾಹಿ, ಸಿನಿಮಾ ನಟ ಉಮೇಶ್ ಹೆಗಡೆ ವಿಧಿವಶ; ಸಂತಾಪ ಸೂಚಿಸಿದ ಚಿತ್ರರಂಗ

Vijaya Karnataka Web | 11 Oct 2021, 2:53 pm
Subscribe

ಕನ್ನಡ ಧಾರಾವಾಹಿ, ಸಿನಿಮಾಗಳಲ್ಲಿ ನಟಿಸಿದ್ದ ರಂಗಭೂಮಿ ಕಲಾವಿದ ಉಮೇಶ್ ಹೆಗಡೆ ಅವರು ನಿಧನರಾಗಿದ್ದಾರೆ. ಈ ವಿಷಯವನ್ನು ಅವರ ಪುತ್ರ ಸೋಶಿಯಲ್ ಮೀಡಿಯಾದಲ್ಲಿ ಅಧಿಕೃತಪಡಿಸಿದ್ದಾರೆ. ಆ ಬಗ್ಗೆ ಮಾಹಿತಿ ಇಲ್ಲಿದೆ.

ಹೈಲೈಟ್ಸ್‌:

  • ಕನ್ನಡ ಧಾರಾವಾಹಿ, ಸಿನಿಮಾಗಳಲ್ಲಿ ಉಮೇಶ್ ಹೆಗಡೆ ನಟಿಸಿದ್ದಾರೆ
  • ಮೂಲತಃ ಉಮೇಶ್ ಹೆಗಡೆ ರಂಗಭೂಮಿ ಕಲಾವಿದರು
  • ಉಮೇಶ್ ಹೆಗಡೆ ಅವರು ಉತ್ತರ ಕನ್ನಡ ಜಿಲ್ಲೆಯ ಶಿರಸಿಯವರು
  • ಉಮೇಶ್ ಹೆಗಡೆ ನಿಧನಕ್ಕೆ ಸಂತಾಪ ಸೂಚಿಸಿದ ಕನ್ನಡ ಚಿತ್ರರಂಗ
Umesh Hegde
ಕನ್ನಡ ಧಾರಾವಾಹಿ, ಸಿನಿಮಾ ನಟ, ರಂಗಭೂಮಿ ಕಲಾವಿದ ಉಮೇಶ್ ಹೆಗಡೆ (ಅಕ್ಟೋಬರ್ 10) ನಿಧನರಾಗಿದ್ದಾರೆ. ಈ ವಿಷಯವನ್ನು ಅವರ ಪುತ್ರ ಆದರ್ಶ್ ಹೆಗಡೆ ಅಧಿಕೃತಪಡಿಸಿದ್ದಾರೆ. ಉಮೇಶ್ ಹೆಗಡೆ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಶಿರಸಿಯವರು.

ಉಮೇಶ್ ಹೆಗಡೆ ಪುತ್ರ ಆದರ್ಶ್ ಹೆಗಡೆ ಹೇಳಿದ್ದೇನು?

"ನನ್ನ ತಂದೆ ಉಮೇಶ್ ಹೆಗಡೆ ಇನ್ನಿಲ್ಲ ಎಂದು ಹೇಳಲು ದುಃಖವಾಗುತ್ತಿದೆ. ನಿನ್ನೆ ಸಂಜೆ 7.45ಕ್ಕೆ ಅವರು ಮನೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಇದು ಸಹಜ ಸಾವು. ಇಂದು ಹರಿಶ್ಚಂದ್ರ ಘಾಟ್‌ನಲ್ಲಿ ಸಂಜೆ 5.30ಗೆ ಅಂತ್ಯಕ್ರಿಯೆ ನೆರವೇರಲಿದೆ" ಎಂದು ಉಮೇಶ್ ಹೆಗಡೆ ಮಗ ಆದರ್ಶ್ ಹೆಗಡೆ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದ್ದಾರೆ. ಆದರ್ಶ್ ಹೆಗಡೆ ಅವರು ಕನ್ನಡ ಧಾರಾವಾಹಿ ಲೋಕದಲ್ಲಿ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ.

ಸಂತಾಪ ಸೂಚಿಸಿದ ನಟ ಶಂಕರ್ ಭಟ್

"ತುಂಬಾ ತುಂಬಾ ದುಃಖ ಸಂಗತಿ .ಉಮೇಶ ಹೆಗಡೆ ಇನ್ನಿಲ್ಲ ಸುದ್ದಿ ಕೇಳಿ, ಸಿಡಿಲು ಬಡಿದಂತೆ ಆಯ್ತು. ಸುಮಾರು 40 ವರ್ಷಗಳ ಗೆಳೆತನ ,ಸರಳ, ಸಜ್ಜನ, ಉತ್ತಮ ರಂಗಭೂಮಿ ಹಾಗೂ ಚಲನ ಚಿತ್ರ, ಕಿರುತೆರೆ ಕಲಾವಿದರು. ಸುಮಾರು ಚಲನ ಚಿತ್ರಗಳು ಮತ್ತು ಧಾರಾವಾಹಿಗಳಲ್ಲಿ ಒಟ್ಟಿಗೆ ಅಭಿನಯಿಸಿದ್ದೆವು. 'ಸಿಂಹದ ಮರಿ' ಚಲನ ಚಿತ್ರದ ಸಮಯದಲ್ಲಿ ಸುಮಾರು 20 ದಿನಗಳು ಮೈಸೂರ್‌ನಲ್ಲಿ ಒಂದೇ ರೂಮ್‌ನಲ್ಲಿ ಇದ್ದೆವು. ನಮ್ಮ ಉತ್ತರ ಕನ್ನಡ ಜಿಲ್ಲೆ ಶಿರಸಿ ಸಮೀಪದವರು. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ, ಹಾಗೂ ಅವರ ಕುಟುಂಬಕ್ಕೆ ಈ ದುಃಖ ಭರಿಸುವ ಶಕ್ತಿಯನ್ನು ದೇವರು ಕೊಡಲಿ ಎಂದು ಪ್ರಾರ್ಥಿಸುತ್ತೇನೆ" ಎಂದು ನಟ ಶಂಕರ್ ಭಟ್ ಅವರು ಸೋಶಿಯಲ್ ಮೀಡಿಯಾದಲ್ಲಿ ಉಮೇಶ್ ಹೆಗಡೆ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಕನ್ನಡ ನಟ ಸತ್ಯಜಿತ್ ನಿಧನಕ್ಕೆ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಸಂತಾಪ
ಉಮೇಶ್ ಹೆಗಡೆ ನಟಿಸಿದ ಸಿನಿಮಾಗಳು ಯಾವುವು?
'ಬಹಳ ಚೆನ್ನಾಗಿದೆ', 'ಗೋಪಿ ಕಲ್ಯಾಣ', 'ಲವ್ ಟ್ರೇನಿಂಗ್', 'ಭರ್ಜರಿ ಗಂಡು', 'ನೀ ಬರೆದ ಕಾದಂಬರಿ' ಮುಂತಾದ ಸಿನಿಮಾಗಳಲ್ಲಿ ಉಮೇಶ್ ಹೆಗಡೆ ನಟಿಸಿದ್ದಾರೆ. ಉಮೇಶ್ ಹೆಗಡೆ ಅವರು ಸಾಕಷ್ಟು ಧಾರಾವಾಹಿಗಳಲ್ಲಿ ನಟಿಸಿದ್ದು, ಕನ್ನಡಿಗರಿಗೆ ಚಿರಪರಿಚಿತರಾಗಿದ್ದಾರೆ.

ಹಿರಿಯ ನಟ 'ಶಂಖನಾದ' ಅರವಿಂದ್ ಕೊರೊನಾ ಸೋಂಕಿನಿಂದ ನಿಧನ

ಸತ್ಯಜಿತ್ ನಿಧನ
ಕನ್ನಡ ಚಿತ್ರರಂಗದ ಹಿರಿಯ ನಟ ಸತ್ಯಜಿತ್ ತೀವ್ರ ಅನಾರೋಗ್ಯದಿಂದ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ (ಅಕ್ಟೋಬರ್ 11) ಮಧ್ಯರಾತ್ರಿ 2 ಗಂಟೆಗೆ ಕೊನೆಯುಸಿರೆಳೆದಿದ್ದಾರೆ. ಕಳೆದ ಕೆಲ ದಿನಗಳಿಂದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. 650ಕ್ಕೂ ಅಧಿಕ ಸಿನಿಮಾಗಳಲ್ಲಿ ಸತ್ಯಜಿತ್ ನಟಿಸಿದ್ದರು. ಸತ್ಯಜಿತ್ ನಿಧನಕ್ಕೆ ಕನ್ನಡ ಚಿತ್ರರಂಗ, ರಾಜಕಾರಣಿಗಳು ಸಂತಾಪ ಸೂಚಿಸಿದ್ದರು. ಈ ಹಿಂದೆಯೇ ಸತ್ಯಜಿತ್ ಒಂದು ಕಾಲು ಕಳೆದುಕೊಂಡರೂ ಕೂಡ, ವೀಲ್ ಚೇರ್ ಮೇಲೆ ಕೂತು ನಟಿಸಿದ್ದರು. ಹಿಂದಿ ಸಿನಿಮಾದಲ್ಲಿಯೂ ಸತ್ಯಜಿತ್ ನಟಿಸಿದ್ದರು. ಕೊರೊನಾ ವೈರಸ್ ಸೋಂಕು ಭಾರತಕ್ಕೆ ಕಾಲಿಟ್ಟ ಮೇಲೆ ಸ್ಯಾಂಡಲ್‌ವುಡ್‌ನಿಂದ ಬಾಲಿವುಡ್‌ವರೆಗೆ ಸಾಕಷ್ಟು ಕಲಾವಿದರು, ತಂತ್ರಜ್ಞರು ಇಹಲೋಕ ತ್ಯಜಿಸಿದ್ದಾರೆ.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ