Please enable javascript.Junior Ranbir Kapoor Death,ಜ್ಯೂನಿಯರ್ ರಣಬೀರ್ ಕಪೂರ್ ಎಂದು ಪ್ರಸಿದ್ಧಿ ಪಡೆದಿದ್ದ ಜುನೈದ್ ಶಾ ಇನ್ನಿಲ್ಲ! - bollywood actor junior ranbir kapoor junaid shah is no more due to cardiac arrest - Vijay Karnataka

ಜ್ಯೂನಿಯರ್ ರಣಬೀರ್ ಕಪೂರ್ ಎಂದು ಪ್ರಸಿದ್ಧಿ ಪಡೆದಿದ್ದ ಜುನೈದ್ ಶಾ ಇನ್ನಿಲ್ಲ!

Vijaya Karnataka Web | 17 Jul 2020, 10:09 pm
Subscribe

ಬಾಲಿವುಡ್‌ನ ಜನಪ್ರಿಯ ನಟ ರಣ್‌ಬೀರ್ ಕಪೂರ್ ಅವರಂತೆ ಹೋಲುವ ಇನ್ನೊಬ್ಬ ವ್ಯಕ್ತಿ ನಿಧನರಾಗಿದ್ದಾರೆ. ಇವರ ನಿಧನಕ್ಕೆ ಕುಟುಂಬಸ್ಥರು, ಸ್ನೇಹಿತರು ಜುನೇದ್ ಶಾ ಅವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.

bollywood actor junior ranbir kapoor junaid shah is no more due to cardiac arrest
ಜ್ಯೂನಿಯರ್ ರಣಬೀರ್ ಕಪೂರ್ ಎಂದು ಪ್ರಸಿದ್ಧಿ ಪಡೆದಿದ್ದ ಜುನೈದ್ ಶಾ ಇನ್ನಿಲ್ಲ!
ಒಂದೇ ವ್ಯಕ್ತಿಯಂತೆ ಏಳು ಜನ ಇರುತ್ತಾರೆ ಎಂಬ ಮಾತಿದೆ. ರಾಜಕೀಯ ಮತ್ತು ಸಿನಿಮಾ ಲೋಕದ ಜನಪ್ರಿಯ ವ್ಯಕ್ತಿಗಳನ್ನು ಹೋಲುವವರು ಇದ್ದಾರೆ. ನಟ ರಣ್‌ಬೀರ್ ಕಪೂರ್ ಹೋಲುವ ವ್ಯಕ್ತಿಯೊಬ್ಬರು ಇದ್ದಿದ್ದರು ಎಂದು ಹೇಳುವ ಪರಿಸ್ಥಿತಿ ಬಂದಿದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನೇ ಹೋಲುವ ವ್ಯಕ್ತಿಯೊಬ್ಬರ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಈ ಹಿಂದೆ ವೈರಲ್ ಆಗಿತ್ತು. ಬಾಲಿವುಡ್ ನಟ ರಣ್‌ಬೀರ್ ಕಪೂರ್ ಹೋಲುವ ವ್ಯಕ್ತಿಯೊಬ್ಬರು ಸೋಶಿಯಲ್ ಮೀಡಿಯಾದಲ್ಲಿ ತುಂಬ ವೈರಲ್ ಆಗಿದ್ದರು. ರಣ್‌ಬೀರ್ ಕಪೂರ್ ಅವರನ್ನೇ ಹೋಲುವಂತೆ ಈ ವ್ಯಕ್ತಿ ಫೋಟೋಶೂಟ್ ಕೂಡ ಮಾಡಿಸಿಕೊಂಡಿದ್ದರು. ಕಾಶ್ಮೀರ ಮೂಲದ ಜುನೇದ್ ಶಾ ಈ ವ್ಯಕ್ತಿಯ ಹೆಸರು.

ಶುಕ್ರವಾರ ಶ್ರೀನಗರದ ಇಲಾಹಿ ಭಾಗ್‌ನಲ್ಲಿ ಕಾರ್ಡಿಯಾಕ್ ಅರೆಸ್ಟ್ (ಹೃದಯ ಸ್ತಂಭನ)ದಿಂದಾಗಿ ಜುನೈದ್ ನಿಧನರಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಜ್ಯೂನಿಯರ್ ರಣ್‌ಬೀರ್ ಎಂದೇ ಇವರನ್ನು ಕರೆಯಲಾಗುತ್ತಿದ್ದರು. ರಿಷಿ ಕಪೂರ್ ಅವರು ಜುನೈದ್ ಫೋಟೋವನ್ನು ನೋಡಿ ಟ್ವಿಟರ್‌ನಲ್ಲಿ 'ಅರೇ ನನ್ನ ಮಗ ರಣಬೀರ್ ಕಪೂರ್ ಅವರನ್ನೇ ಹೋಲುವಂತ ವ್ಯಕ್ತಿ ಇದ್ದಾನೆ, ನಂಬಲು ಆಗುತ್ತಿಲ್ಲ' ಎಂದು ಟ್ವೀಟ್ ಮಾಡಿದ್ದರು. ಮುಂಬೈನಲ್ಲಿ ವಾಸವಿದ್ದ ಜುಲೈದ್, ಸಿನಿಮಾ ಮತ್ತು ಮಾಡೆಲಿಂಗ್ ಕ್ಷೇತ್ರದಲ್ಲಿಯೇ ತೊಡಗಿಸಿಕೊಂಡಿದ್ದರು. ಇತ್ತೀಚೆಗೆ ಜುನೈದ್ ಶ್ರೀನಗರಕ್ಕೆ ಆಗಮಿಸಿದ್ದರು.

Also Read-ರಣಬೀರ್‌ ಕಪೂರ್‌ ಒಬ್ಬ ಹುಡುಗನ ಜೊತೆ ಮದುವೆ ಆಗೋದೇ ಉತ್ತಮ ಎಂದಿದ್ರು ರಿಷಿ ಕಪೂರ್‌!

ಅತಿ ಚಿಕ್ಕ ವಯಸ್ಸಿನಲ್ಲಿಯೇ 28 ವರ್ಷ ವಯಸ್ಸಿಗೆ ಹೃದಯಾಘಾತದಿಂದಾಗಿ ಜುನೈದ್ ನಿಧನರಾಗಿದ್ದಾರೆ. ಜುನೈದ್ ನಿಧನಕ್ಕೆ ಇವರ ಕುಟುಂಬಸ್ಥರು, ಸ್ನೇಹಿತರು ಕಂಬನಿ ಮಿಡಿದಿದ್ದಾರೆ.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ