Please enable javascript.Prathima Devi,ರಾಜೇಂದ್ರಸಿಂಗ್ ಬಾಬು, ವಿಜಯಲಕ್ಷ್ಮೀ ಸಿಂಗ್ ತಾಯಿ ಹಿರಿಯ ನಟಿ ಪ್ರತಿಮಾ ದೇವಿ ಇನ್ನಿಲ್ಲ - veteran-actress-prathima-devi-passes-away - Vijay Karnataka

ರಾಜೇಂದ್ರಸಿಂಗ್ ಬಾಬು, ವಿಜಯಲಕ್ಷ್ಮೀ ಸಿಂಗ್ ತಾಯಿ ಹಿರಿಯ ನಟಿ ಪ್ರತಿಮಾ ದೇವಿ ಇನ್ನಿಲ್ಲ

Vijaya Karnataka Web | 6 Apr 2021, 8:15 pm
Subscribe

ಕನ್ನಡ ಚಿತ್ರರಂಗದ ಹಿರಿಯ ನಟಿ ಪ್ರತಿಮಾ ದೇವಿ ನಿಧನರಾಗಿದ್ದಾರೆ. ಇಂದು ಮಧ್ಯಾಹ್ನ 2.30ರ ಸುಮಾರಿಗೆ ನಟಿ ಪ್ರತಿಮಾ ದೇವಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 88 ವರ್ಷ ವಯಸ್ಸಾಗಿತ್ತು.

ಹೈಲೈಟ್ಸ್‌:

  • ಕಳಚಿತು ಕನ್ನಡ ಚಿತ್ರರಂಗದ ಹಿರಿಯ ಕೊಂಡಿ
  • ಕನ್ನಡ ಚಿತ್ರರಂಗದ ಹಿರಿಯ ನಟಿ ಪ್ರತಿಮಾ ದೇವಿ ಇನ್ನಿಲ್ಲ
  • ನಿರ್ದೇಶಕ ರಾಜೇಂದ್ರಸಿಂಗ್ ಬಾಬು, ನಟಿ ವಿಜಯಲಕ್ಷ್ಮಿ ಸಿಂಗ್ ತಾಯಿ ನಟಿ ಪ್ರತಿಮಾ ದೇವಿ
veteran actress prathima devi passes away
ರಾಜೇಂದ್ರಸಿಂಗ್ ಬಾಬು, ವಿಜಯಲಕ್ಷ್ಮೀ ಸಿಂಗ್ ತಾಯಿ ಹಿರಿಯ ನಟಿ ಪ್ರತಿಮಾ ದೇವಿ ಇನ್ನಿಲ್ಲ
ಕನ್ನಡ ಚಿತ್ರರಂಗದ ಹಿರಿಯ ನಟಿ ಪ್ರತಿಮಾ ದೇವಿ ನಿಧನರಾಗಿದ್ದಾರೆ. ಇಂದು ಮಧ್ಯಾಹ್ನ 2.30ರ ಸುಮಾರಿಗೆ ನಟಿ ಪ್ರತಿಮಾ ದೇವಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 88 ವರ್ಷ ವಯಸ್ಸಾಗಿತ್ತು.
ಏಪ್ರಿಲ್ 9, 1932 ರಂದು ಪ್ರತಿಮಾ ದೇವಿ ಜನಿಸಿದ್ದರು. ಇನ್ನೂ ಮೂರು ದಿನ ಕಳೆದಿದ್ದರೆ 89ನೇ ವಸಂತಕ್ಕೆ ನಟಿ ಪ್ರತಿಮಾ ದೇವಿ ಕಾಲಿಡುತ್ತಿದ್ದರು. ಆದರೆ, ಅಷ್ಟರಲ್ಲೇ ದುರಾದೃಷ್ಟವಶಾತ್ ಬಾರದ ಲೋಕಕ್ಕೆ ಪ್ರತಿಮಾ ದೇವಿ ಪಯಣಿಸಿದ್ದಾರೆ.

1947ರಲ್ಲಿ ತೆರೆಕಂಡ 'ಕೃಷ್ಣಲೀಲಾ' ಚಿತ್ರದ ಮೂಲಕ ಬಣ್ಣದ ಪ್ರಪಂಚಕ್ಕೆ ಪ್ರತಿಮಾದೇವಿ ಪದಾರ್ಪಣೆ ಮಾಡಿದ್ದರು. 1951ರಲ್ಲಿ ತೆರೆಕಂಡು ಶತದಿನೋತ್ಸವ ಕಂಡ ಪ್ರಪ್ರಥಮ ಕನ್ನಡ ಸಿನಿಮಾ 'ಜಗನ್‌ಮೋಹಿನಿ' ಚಿತ್ರದಲ್ಲಿ ಪ್ರತಿಮಾ ದೇವಿ ಪ್ರಮುಖ ಪಾತ್ರದಲ್ಲಿ ಮಿಂಚಿದ್ದರು.

'ಶಿವ ಪಾರ್ವತಿ', 'ಶ್ರೀ ಶ್ರೀನಿವಾಸ ಕಲ್ಯಾಣ', 'ಮುಟ್ಟಿದ್ದೆಲ್ಲಾ ಚಿನ್ನ', 'ಮಂಗಳ ಸೂತ್ರ', 'ಪಾಲಿಗೆ ಬಂದದ್ದೇ ಪಂಚಾಮೃತ', 'ಪಾತಾಳ ಮೋಹಿನಿ', 'ನಾಗರಹಾವು', 'ನಾಗಕನ್ಯೆ', 'ನಾರದ ವಿಜಯ', 'ಧರಣಿ ಮಂಡಲ ಮಧ್ಯದೊಳಗೆ', 'ರಾಮಾ ಶಾಮಾ ಭಾಮ' ಸೇರಿದಂತೆ 60ಕ್ಕೂ ಹೆಚ್ಚು ಚಿತ್ರಗಳಲ್ಲಿ ಪ್ರತಿಮಾ ದೇವಿ ಅಭಿನಯಿಸಿದ್ದರು.

ನಿರ್ದೇಶಕ ಶಂಕರ್ ಸಿಂಗ್‌ರನ್ನು ಪ್ರತಿಮಾ ದೇವಿ ಮದುವೆಯಾಗಿದ್ದರು. ಶಂಕರ್ ಸಿಂಗ್-ಪ್ರತಿಮಾ ದೇವಿ ದಂಪತಿಗೆ ನಾಲ್ಕು ಜನ ಮಕ್ಕಳು. ಎಸ್.ವಿ.ರಾಜೇಂದ್ರ ಸಿಂಗ್ ಬಾಬು, ಸಂಗ್ರಾಮ್ ಸಿಂಗ್, ಜಯರಾಜ್ ಸಿಂಗ್ ಮತ್ತು ವಿಜಯಲಕ್ಷ್ಮೀ ಸಿಂಗ್.

ಮೂವರು ಸುಂದರಿಯರ ಜತೆ 'ಯಾನ' ಹೊರಟ ವಿಜಯಲಕ್ಷ್ಮಿ ಸಿಂಗ್
ಮೈಸೂರಿನಲ್ಲಿರುವ ಸ್ವಂತ ನಿವಾಸಕ್ಕೆ ಪ್ರತಿಮಾ ದೇವಿ ಅವರ ಪಾರ್ಥೀವ ಶರೀರವನ್ನು ಕೊಂಡೊಯ್ಯಲಾಗಿದ್ದು, ನಾಳೆ ಮಧ್ಯಾಹ್ನ 1 ಗಂಟೆ ಸುಮಾರಿಗೆ ಅಂತ್ಯಕ್ರಿಯೆ ನಡೆಯಲಿದೆ. ಪ್ರತಿಮಾ ದೇವಿ ನಿಧನಕ್ಕೆ ಕನ್ನಡ ಚಿತ್ರರಂಗದ ಮಂದಿ ಕಂಬನಿ ಮಿಡಿದಿದ್ದಾರೆ. (ಫೋಟೋ ಕೃಪೆ: ವಿಜಯಲಕ್ಷ್ಮಿ ಸಿಂಗ್ ಇನ್ಸ್ಟಾಗ್ರಾಮ್ ಪ್ರೊಫೈಲ್)
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ